Flyover Country

  • Linear Location

    Wheeler Road Flyover, Bengaluru, India (12°59'47"N 77°37'8"E)

The Story in English

What you see vaulting above you is an exquisite testament to the still present influence of the Tehachapi—the great road building culture of Kcymaerxthaere. The Tehachapi did not build these precise flyovers, but they would surely recognize the overall structure as a perfect venue for their remarkable music, crafted to be performed by wheeled orchestras of human powered vehicles—as well as myriad other instruments pulled by gravity and great beasts. Instead of plucking strings or playing a keyboard, Tehachapic wheels (and other devices) played the ridges and textures of the roads, carefully crafted and tuned by their gifted engineers and composers for maximum harmonic effect.

The Tehachapi were driven from their native rezhn of Estrelliia after a decisive military defeat. However, many of their number escaped on rafts of asphalt—including the Second Band of Engineers whose rafts skipped across what we call the Indian Ocean. One of those rafts hit a rogue wave and ended up on the coast due East of here. The survivors never saw their compatriots again and so, determined to escape the watery shore, they eventually found their way here. One of their most famous performances involved Jlotkammen, the legendary Nayn Jingkat (a bit like a saber-tooth tiger, but more deadly and literate), whose purring had the force of song and the edge of thunder. Jlotkammen, with her human friend Culev Larsze, riding on her back, was drawn by the music that she had feared was extinct and soon the great beat performed a kind of duet with the Tehachapic orchestra. From across a generation of generations, the beauty of that Kcymaerxthaere night still echoes today.

The Story in Kannada

ಮೇಲ್ಸೇತುವೆಯ ರಾಷ್ಟ್ರ

ನಿಮ್ಮ ಮೇಲೆ ಎತ್ತರವಾಗಿ ಕಾಣಿಸುತ್ತಿರುವ ಕಮಾನು ಛಾವಣಿ, ತೆಹಚಾಪಿಯರ ಇಂದಿಗೂ ಪ್ರಸ್ತುತವಾಗಿರುವ ಪ್ರಭಾವಕ್ಕೆ ಒಂದು ಸೊಗಸಾದ ಸಾಕ್ಷಿಯಾಗಿದೆ. ಕೈಮರೆಕ್ಸ್ಥೀರ್ ನ ಅಮೋಘ ರಸ್ತೆ ನಿರ್ಮಾಣ ಸಂಸ್ಕೃತಿಯಾದ ತೆಹಚಾಪಿಯರು ಈ ಮೇಲ್ಸೇತುವೆಗಳನ್ನು ತಾವಾಗಿಯೇ ನಿರ್ಮಿಸಲಿಲ್ಲ, ಆದರೆ ಇಲ್ಲಿರುವ ರಚನೆಯನ್ನು, ಮಾನವ ಚಾಲಿತ ವಾಹನಗಳ ಆರ್ಕೆಸ್ಟ್ರಾದಿಂದಲೂ, ಗುರುತ್ವ ಮತ್ತು ಬೃಹತ್ ಮೃಗಗಳಿಂದ ನುಡಿಸಲ್ಪಡುವ ಅಸಂಖ್ಯಾತ ವಾದ್ಯಗಳಿಂದಲೂ, ಕೂಡಿದ ತಮ್ಮ ಅದ್ಭುತವಾದ ಸಂಗೀತಕ್ಕೆ ಸೂಕ್ತವಾದ ಸ್ಥಳವೆಂದು ಅವರು ಖಂಡಿತವಾಗಿ ಗುರುತಿಸುತ್ತಾರೆ. ಈ ಸಂಗೀತವು ತಂತಿಗಳನ್ನು ಎಳೆಯುವುದರಿಂದ ಅಥವಾ ಕೀಬೋರ್ಡ್ ನುಡಿಸುವುದರಿಂದ ಹುಟ್ಟುತ್ತಿರಲಿಲ್ಲ; ಬದಲಿಗೆ, ಗರಿಷ್ಠ ಸಾಮರಸ್ಯಕ್ಕೋಸ್ಕರ ಅವರ ಪ್ರತಿಭಾನ್ವಿತ ಎಂಜಿನಿಯರ್ಗಳು ಮತ್ತು ಸಂಯೋಜಕರು ಎಚ್ಚರಿಕೆಯಿಂದ ರಚಿಸಿದ್ದ ಮತ್ತು ಶ್ರುತಿ ಮಾಡಿದ್ದ ರಸ್ತೆಗಳ ಅಂಚುಗಳನ್ನು ಮತ್ತು ವಿನ್ಯಾಸಗಳನ್ನು ತೆಹಚಾಪಿಕ್ ಚಕ್ರಗಳು (ಮತ್ತು ಇತರ ಸಾಧನಗಳು) ನುಡಿಸುವುದರಿಂದ ಹುಟ್ಟುತ್ತಿದ್ದವು.

ಒಂದು ನಿರ್ಣಾಯಕ ಯುದ್ಧದಲ್ಲಿ ಸೋತ ನಂತರ ತೆಹಚಾಪಿಯರನ್ನು ತಮ್ಮ ಮೂಲಸ್ಥಾನವಾದ ಎಸ್ಟ್ರೇಲಿಯಾ ರೀಜ಼ನ್ನಿಂದ ಓಡಿಸಲಾಯಿತು. ಅವರಲ್ಲಿ ಹೆಚ್ಚಿನವರು ಡಾಂಬರಿನ ತೆಪ್ಪಗಳ ಮೇಲೆ ತಪ್ಪಿಸಿಕೊಂಡರು. ಇವರಲ್ಲಿ ಎರಡನೆಯ ಬ್ಯಾಂಡ್ ಆಫ್ ಎಂಜಿನಿಯರ್ಗಳ ತೆಪ್ಪಗಳು, ನಾವು ಹಿಂದೂ ಮಹಾಸಾಗರ ಎಂದು ಕರೆಯುವ ಸಾಗರವನ್ನು ದಾಟಿದವು. ಇವುಗಳಲ್ಲಿ ಬೃಹತ್ ಅಲೆಗೆ ಸಿಕ್ಕಿಕೊಂಡ ಒಂದು ತೆಪ್ಪವು, ಇಲ್ಲಿಂದ ಪೂರ್ವದಲ್ಲಿರುವ ಕರಾವಳಿಗೆ ಬಂದು ಮುಟ್ಟಿತು. ಇದರಲ್ಲಿ ಬದುಕುಳಿದವರು ಮತ್ತೆ ತಮ್ಮ ದೇಶವಾಸಿಗಳನ್ನು ನೋಡಲೇ ಇಲ್ಲ. ಇವರು ನೀರಿನ ತೀರದಿಂದ ದೂರವಾಗಲು ನಿರ್ಧರಿಸಿ, ಅಂತಿಮವಾಗಿ ಇಲ್ಲಿಗೆ ಬಂದು ತಲುಪಿದರು. ಅವರ ಅತ್ಯಂತ ಪ್ರಸಿದ್ಧವಾದ ಒಂದು ಪ್ರದರ್ಶನದಲ್ಲಿ ಜ್ಲಾಟ್ಕೋಮಿನ್ ಎಂಬ ಒಂದು ಪೌರಾಣಿಕ ನಾಯ್ನ್ ಜಿಂಗ್ಕಾಟ್ (ಇವು ಸ್ವಲ್ಪಮಟ್ಟಿಗೆ ಸೇಬರ್ಟೂತ್ ಟೈಗರ್ನಂತೆಯೇ, ಆದರೆ ಹೆಚ್ಚು ಭಯಂಕರ, ಮತ್ತು ಇವಕ್ಕೆ ಓದಲು ಗೊತ್ತು) ಭಾಗವಹಿಸಿತ್ತು. ಇವಳ ಗುರುಗುಟ್ಟುವ ಶಬ್ದಕ್ಕೆ ಹಾಡಿನ ಬಲ ಮತ್ತು ಗುಡುಗಿನ ಗುಣ ಇದ್ದಿತು. ಜ್ಲಾಟ್ಕೋಮಿನ್ ತನ್ನ ಮಾನವ ಸ್ನೇಹಿತೆಯಾದ ಕೂಲೆವ್ ಲಾರ್ಝಳನ್ನು ತನ್ನ ಬೆನ್ನಿನ ಮೇಲೆ ಸವಾರಿ ಮಾಡಿಸುತ್ತಿದ್ದಾಗ, ಅವಳು ನಶಿಸಿಹೋಗಿದೆಯೆಂದು ಭಾವಿಸಿದ್ದ ಸಂಗೀತವು ಇವಳನ್ನು ಸೆಳೆಯಿತು; ನಂತರ ಈ ಮಹಾನ್ ಮೃಗವು ತೆಹಚಾಪಿಕ್ ಆರ್ಕೆಸ್ಟ್ರಾದೊಂದಿಗೆ ಒಂದು ರೀತಿಯ ಯುಗಳ ಗೀತೆಯನ್ನು ಪ್ರದರ್ಶಿಸಿತು. ಹಲವಾರು ತಲೆಮಾರುಗಳಾದರೂ, ಕೈಮರೆಕ್ಸ್ಥೀರ್ ರಾತ್ರಿಯ ಸೌಂದರ್ಯವು ಇಂದಿಗೂ ಪ್ರತಿಧ್ವನಿಸುತ್ತಿದೆ.

ಕೂಲೆವ್ ಲಾರ್ಝಳಿಗಾದರೂ, ಇನ್ನು ಕೆಲವೇ ಸಮಯದಲ್ಲಿ, ಇಲ್ಲಿಂದ ಅನತಿ ದೂರದಲ್ಲಿ, ಈಗ ಐತಿಹಾಸಿಕವಾಗಿರುವ, ತನ್ನ ಎಕೆಲ್ಮುಂಡೀ ಕರ್ವೇಲ (ಇದರರ್ಥ ಜ್ಞಾನದ ಗೋಪುರ) ವನ್ನು ತಾನು ಪ್ರಕಟಗೊಳ್ಳಿಸುತ್ತಾಳೆ ಎನ್ನುವ ಕಲ್ಪನೆಯೂ ಇರಲಿಲ್ಲ.

The Flyover Country Showcase, October 5th, 2021

Visit the Flyover Country Showcase Gather.Town Interactive Map

The Flyover Country: Showcase presented the work 14 artists have been engaged in through a collaborative workshop that we ran in July 2021. Organized in partnership with KcymaerxthaereJaaga & BeFantastic, ‘Flyover Country’ is a story from the parallel universe of Kcymaerxthaere as conceived by Geographer-at-Large, Eames Demetrios. A group of visual artists, new media artists, animators and muralists from Bangalore responded to this story as the crux of our visual explorations, to manifest their imaginations into renderings of murals that we hope to paint onto a flyover in Bangalore when the situation with the pandemic permits.

Although this event has come to pass, you can visit the highly interactive, socially-driven, gamified virtual landscape we’ve set up for the event on Gather.Town: Flyover Country: Showcase Gather.Town

Team Iolwa's Mural Designs

Team Iolwa is the dynamic duo consisting of artists Aishwarya Sultania and Sukanya Paul.

Team Grwosts (the Time Guides)

 

Team Dangaroos

Team Shapeshifters

Bakula Nayak's Mural Designs

Amitabh Kumar's Mural Design

Gallery

View All